Friday, 20 January 2012

ಇಂದಿನ ರಾಜಕೀಯ ಮತ್ತು ಮಾಧ್ಯಮಗಳ ನಡುವೆ ಕಂಡುಬರುವಂತಹ ಸಾಮ್ಯತೆಗಳು

ಇತ್ತೀಚಿಗೆ ನಾವು ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ.ಇಂದಿನ ರಾಜಕೀಯ ವ್ಯವಸ್ಥೆಗೂ,  ಇಂದಿನ           ಮಾಧ್ಯಮ (ದೃಶ್ಯ) ಗಳಿಗೂ ವ್ಯತ್ಯಾಸಗಳೇ ಕಾಣುತ್ತಿಲ್ಲ.
ರಾಜಕೀಯದಲ್ಲಿ  ರಾಜಕಾರಣಿಗಳು ಪಕ್ಷದಿಂದ ಪಕ್ಷಗಳಿಗೆ ಹಾರುತ್ತಾ, ವಲಸೆ ಹೋಗುವುದು ಸಾಮಾನ್ಯವಾಗಿದೆ.
ದೃಶ್ಯ ಮಾಧ್ಯಮಗಳಲ್ಲೂ ಇದನ್ನು ಕಾಣುತ್ತಿದ್ದೇವೆ. 

---------------------------------*ಪಕ್ಷಾಂತರ*---------------------------------------
ಇಂದು   ಒಂದು  ಟಿವಿಯಲ್ಲಿ ಇದ್ದವರು ನಾಳೆ ಬೇರೆ ವಾಹಿನಿಯಲ್ಲಿರುತ್ತಾರೆ. ಸುವರ್ಣದಲ್ಲಿದ್ದವರು ಇನ್ಯಾವುದೋ ವಾಹಿನಿಗೆ ಜಿಗಿದಿರುತ್ತಾರೆ. ಇದು ನಿರಂತರವಾಗಿ ಆಗುತ್ತಿದೆ. 

ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗೆ ತಮ್ಮ ರಾಜಕೀಯ ಭವಿಷ್ಯಕ್ಕೆ ಜಿಗಿದಾಟಗಳು ಪರದಾಟಗಳು ಮಾಡುತ್ತಿದ್ದರೆ, ಅವರುಗಳ ತಪ್ಪುಗಳನ್ನು ಜನರಿಗೆ ತೋರಿಸುತ್ತಿದ್ದೇವೆ ಎಂಬ ಭ್ರಾಂತಿಯಲ್ಲಿರುವ ನಮ್ಮ ಮಾಧ್ಯಮಗಳು ತಮ್ಮ ನೆಲೆಗಳಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ.  ರಾಜಕಾರಣಿಗಳ ಪಕ್ಷಾಂತರಗಳ ಬಗ್ಗೆ ಗಂಟೆಗಟ್ಟಲೇ ಟಿ.ವಿ ಸ್ಟುಡಿಯೋದಲ್ಲಿ ಮಾತಾನಾಡುವ ಬಹುತೇಕ ಪತ್ರಕರ್ತ ಮಿತ್ರರು ಅವರುಗಳು ತಮ್ಮ ಮೂಲ ವಾಹಿನಿಗಳಿಂದ ಜಿಗಿದು ಮತ್ತೊಂದು ವಾಹಿನಿಯಲ್ಲಿ ಕುಳಿತಿರುತ್ತಾರೆ.
---------------------*ಮೂಲ ವಲಸಿಗರ ತಾರತಮ್ಯ*---------------------------
ರಾಜಕಾರಣದಲ್ಲಿ ಮೂಲ - ವಲಸಿಗರು ಎಂಬ ಕಾರ್ಯಕರ್ತರುಗಳು ಎನ್ನುವ ರಾಜಕಾರಣಿಗಳ ಜಗಳಗಳನ್ನು ನಾವು ನೋಡುತ್ತಿರುತ್ತೇವೆ.
ಹಾಗೆಯೇ, ನಮ್ಮ ಮಾಧ್ಯಮಗಳಲ್ಲಿ ಯಾವುದೋ ವಾಹಿನಿಯಲ್ಲಿದ್ದವರು ಏಕಾಏಕಿ ಮತ್ತೊಂದು ಮಾಧ್ಯಮಕ್ಕೆ ಬಂದು  ವಾಹಿನಿ  ಆರಂಭದಿಂದಲೂ  ಕಾರ್ಯ ನಿರ್ವಹಿಸುತ್ತಿರುವ  ಪತ್ರಕರ್ತರನ್ನು ಮೂಲೆ ಗುಂಪು ಮಾಡಿ, ಅವರ ಮೇಲೆ ಸವಾರಿ ಮಾಡುತ್ತಾ, ಅವರಿಗೆ ಉಸಿರು ಗಟ್ಟಿಸುವ ವಾತಾವರಣ ಸೃಷ್ಠಿ ಮಾಡಿ, ಮೂಲ ಪತ್ರಕರ್ತರು ವಾಹಿನಿಯಿಂದಲೇ ನಿರ್ಗಮಿಸುತ್ತಿರುವ ಘಟನೆಗಳು ಬಹಳಷ್ಟು ಇವೆ.
ಬೇರೆಯವರ, ರಾಜಕಾರಣಿಗಳ ನೈತಿಕತೆಯನ್ನು ಪ್ರಶ್ನಿಸಲು ಹೊರಟಿರುವ ನಮ್ಮ ಮಾಧ್ಯಮ ಮಿತ್ರರಿಗೆ 
ನೈತಿಕ ಶಕ್ತಿ , ಮೌಲ್ಯಗಳ ಬಗ್ಗೆ ಮನವರಿಕೆ ಯಾಗಿದೆಯೇ?

ಕೆಲವು ವಲಸಿಗ ರಾಜಕಾರಣಿಗಳಿಂದ ಅವರು ಗುಂಪುಗಳನ್ನು ಕರೆತಂದು ಹೇಗೆ  ಮೂಲ ಪಕ್ಷದ ಕಾರ್ಯಕರ್ತರು ಮಾನಸಿಕ ವಾಗಿ ಹಿಂಸೆ ಅನುಭವಿಸಿ, ಇಕ್ಕಟ್ಟಿನ ಸ್ಥಿತಿಯಲ್ಲಿ ನಿರ್ಮಾಣ ಮಾಡಿರುತ್ತಾರೋ
ಹಾಗೆಯೇ ಇಂದು ಮಾಧ್ಯಮ ಕ್ಷೇತ್ರದಲ್ಲೂ ಆಗುತ್ತಿದೆ.
ಎಲ್ಲೋ ಇದ್ದವರು ಒಂದು ಮಾಧ್ಯಮಕ್ಕೆ ಬಂದು ತಮ್ಮದೇ ಆದ ಗುಂಪನ್ನು ಕರೆತಂದು ಅವರನ್ನು ಪ್ರತಿಷ್ಟಾಪಿಸುವ  ಉದ್ದೇಶದಿಂದ ಮೂಲ ಪತ್ರಕರ್ತರಿಗೆ ಮಾನಸಿಕ ಕಿರಿಕಿರಿಯನ್ನುಂಟು ಮಾಡುತ್ತಾ, ಅವರುಗಳನ್ನು ಶಾಶ್ವತವಾಗಿ ಮೂಲೆ ಗುಂಪು ಮಾಡುವ ಪ್ರವೃತ್ತಿಗಳು ಹೆಚ್ಚಾಗುತ್ತಿವೆ. 
----------*ಪ್ರಚಾರ ಕಾರ್ಯ ವೈಖರಿ ಮತ್ತು ಅಧಿಕಾರ ದಾಹ*-----------------------
ರಾಜಕಾರಣಿಗಳ ಹಾಗೂ ಮಾಧ್ಯಮಗಳ ನಡುವೆ ಕಂಡು ಬರುವಂತಹ  ವ್ಯತ್ಯಾಸಗಳೆಂದರೆ :
ಸ್ವಾರ್ಥ, ಅಧಿಕಾರ ದಾಹ, ಸಂಪತ್ತು ಗಳಿಕೆ ಇವು ಇಷ್ಟೇ ಆಗಿ ಹೋಗಿವೆ. 
ದೇಶದ ಬಗ್ಗೆ, ರಾಜ್ಯದ ಬಗ್ಗೆ ಕಾಳಜಿಯಂತೂ ಕಾಣುತ್ತಿಲ್ಲ.
ಚುನಾವಣೆ ಸಮಯದಲ್ಲಿ ನಮ್ಮ ರಾಜಕಾರಣಿಗಳು ಭರವಸೆಗಳ ಸುರಿಮಳೆಗಳನ್ನು ಸುರಿಸುತ್ತಾರೆ. ಆಶ್ವಾಸನೆಗಳನ್ನು ಕೊಡುತ್ತಾರೆ. ಜನರನ್ನು ತಮ್ಮತ್ತ ಸೆಳೆಯಲು ಏನೆಲ್ಲಾ ಸರ್ಕಸ್ಸುಗಳನ್ನು ಮಾಡಬೇಕೋ ಅವನ್ನೆಲ್ಲಾ ಮಾಡುತ್ತಾರೆ.

ಹಾಗೆಯೇ ನಮ್ಮ ಮಾಧ್ಯಮಗಳು ಸಹ, ತಮ್ಮ ವಾಹಿನಿಗೆ ಹೆಸರು ಬರಬೇಕು ಅನ್ನೋ ಉದ್ದೇಶದಿಂದ, ಪ್ರಚಾರಕ್ಕೆ ಏನೆಲ್ಲಾ ಬೇಕೋ ಅವನ್ನೆಲ್ಲಾ ಮಾಡುತ್ತಾರೆ. "ಭ್ರಷ್ಟಾಚಾರದ ವಿರುದ್ದ ಅಣ್ಣಾ ಹಜಾರೆಯವರು ಮೊದಲ ಬಾರಿಗೆ ಕರೆನೀಡಿದಾಗ  ನಮ್ಮ ಕನ್ನಡ ಮಾಧ್ಯಮಗಳು ಪೈಪೋಟಿಗೆ ಬಿದ್ದಂತೆ "ಭ್ರಷ್ಟಾಚಾರ ಅಭಿಯಾನಗಳು" ಮಾಡಿದವು. ಬೀದಿ ಬೀದಿಗಳಲ್ಲಿ ತಮ್ಮ ವಾಹನಗಳನ್ನು ಸಿಂಗರಿಸಿಕೊಂಡು ಸುತ್ತಿದ್ದೇ ಸುತ್ತಿದ್ದೆ. " ದಿನ ಕಳೆದಂತೆ ಎಲ್ಲವೂ ಮಾಯ!!
---------------------------------*ಜ್ಯೋತಿಷ್ಯ *-----------------------------
ರಾಜಕಾರಣಿಗಳು ಪ್ರತಿಯೊಂದಕ್ಕೂ ಜ್ಯೋತಿಷಿಗಳ ಮೊರೆ ಹೋಗುವುದು ಫ್ಯಾಷನ್ ಆಗಿಬಿಟ್ಟಿದೆ. ಅಧಿಕಾರ ಪಡೆಯಲು, ಕುರ್ಚಿಯಲ್ಲಿ ಕೂರಲೂ, ರಾಜೀನಾಮೆ ಕೊಡಲು, ಯಾಗಗಳನ್ನು ಮಾಡಲು ಸಹ, ಜೊತೆ ವಾಸ್ತುವಿನ ಮೊರೆ ಹೋಗಲು  ತರತರನಾದ ಜ್ಯೋತಿಷ್ಯಗಳನ್ನು  ಹುಡುಕಿಕೊಂಡು ಅಡ್ಡಾಡುತ್ತಿದ್ದಾರೆ.
ನಮ್ಮ ಮಾಧ್ಯಮಗಳು ಪ್ರತಿನಿತ್ಯ ಎಲ್ಲೆಲ್ಲೋ ಇದ್ದ ಜ್ಯೋತಿಷಿಗಳನ್ನು ಹುಡುಕಿ ಕರೆತಂದು ಒಂದೊಂದು ವಾಹಿನಿಗಳು ಒಬ್ಬೊಬ್ಬರಿಂದ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ನೀಡುತ್ತಿವೆ. (ಸಂಖ್ಯಾಶಾಸ್ಟ್ರ, ವಾಸ್ತು ಶಾಸ್ತ್ರ, ವಿವಿಧ ಶಾಸ್ತ್ರಗಳ ಪರಿಚಯದೊಂದಿಗೆ, ಅವರುಗಳ ಫೋನ್ ನಂಬರುಗಳ ಜೊತೆಗೆ ಅವರುಗಳ ವಿಳಾಸಗಳನ್ನು ಸಹ ಜನರಿಗೆ ಕೊಡುತ್ತಾ ಮೌಢ್ಯತೆಯನ್ನು ತೊಲಗಿಸಲು ಪ್ರಮುಖ ಪಾತ್ರ ವಹಿಸಿಬೇಕಾದವರೇ,  ಜ್ಯೋತಿಷ್ಯದ ಮೇಲೆ ನಂಬಿಕೆ ಹುಟ್ಟಿಸಿ, ಭೀತಿ ತರುವ ಪ್ರಯತ್ನ ಮಾಡುತ್ತಿದ್ದಾರೆ. 
-------------------------------*ಪಕ್ಷ ನಿಷ್ಠೆ, ಮಾಧ್ಯಮ ನಿಷ್ಠೆ*------------------------------------------- 
ಪ್ರತಿಯೊಂದು ರಾಜಕೀಯ ಪಕ್ಷದಲ್ಲೂ ತಮ್ಮ ಪಕ್ಷದವರು ಏನೇ ತಪ್ಪು ಮಾಡಿದರೂ ಅದನ್ನು ಸಮರ್ಥಿಸಿಕೊಳ್ಳುವ ಕೆಲಸಗಳನ್ನು  ರಾಜಕಾರಣಿಗಳು ಮಾಡುತ್ತಿರುತ್ತಾರೆ.
ಅದರಂತೆ ನಮ್ಮ ಮಾಧ್ಯಮಗಳು ಒಂದೊಂದು ಮಾಧ್ಯಮವು ಒಂದೊಂದು ರಾಜಕೀಯ ಪಕ್ಷಗಳ ಪರವಾಗಿ ಅವುಗಳ ಮುಖವಾಣಿಗಳಂತೆ ಕೆಲಸ ಮಾಡುತ್ತಿರುವುದು, ನಂಬಿಕೆ, ಮೌಲ್ಯಾಧಾರಿತ ವಿಷಯಗಳನ್ನು ವಿಶ್ವಾಸಕ್ಕೆ ಅರ್ಹವಲ್ಲದ ಸುದ್ಧಿಗಳನ್ನು ನೀಡಲು ವಿಫಲವಾಗಿ ತಮ್ಮ ಕರ್ತವ್ಯವನ್ನು ಮರೆಯುತ್ತಿದ್ದಾರೆ.
--------------------------------------------------------------------------------------------------------------------------------------ತಾವು ಏನು ಮಾಡುತ್ತಿದ್ದೇವೆ ಅನ್ನೋದರ ಬಗ್ಗೆ ಮರೆತೆ ಹೋಗಿರುತ್ತವೆ. ಅಚ್ಚಕನ್ನಡಿಗರೇ ತುಂಬಿಕೊಂಡಿರುವ (ಮಾಲೀಕ ಪರಭಾಷಿಕರೇ) ವಾಹಿನಿಯಲ್ಲಿ  ಕನ್ನಡ ಅಕ್ಷರಗಳ ಕಗ್ಗೊಲೆಯಾಗುತ್ತಿದ್ದರು. ಅದರ ಬಗ್ಗೆ ಹೇಳಿದರೂ ತಲೆ ಕೆಡಿಸಿಕೊಳ್ಳದ ವಾಹಿನಿಗಳು ಏನೇನೋ ಮಾಡಲು ಹೊರಟಿವೆ. ಬೆಳಗಿನ ಸಮಯದಲ್ಲಿ ಜ್ಞಾನಾರ್ಜನೆಗೆ ಕೇಳುವ 5 ಪ್ರಶ್ನೆಗಳನ್ನು ಕೇಳಿದ್ದೇ ಕೇಳಿ ಕೊಂಡು ಬೇರೆ ಪ್ರಶ್ನೆಗಳಿಗೆ ಬರ ಬಂದಿದೆ ಎಂಬಂತೆ ಮಾಡುತ್ತಿದ್ದಾರೆ. 
ಜನಸಾಮಾನ್ಯರು ಒಮದು ತಪ್ಪು ಮಾಡಿದರೆ. ಬೆಳಗಿನಿಂದ ಸಂಜೆ ವರೆವಿಗೂ ಆ ವಿಚಾರಗಳನ್ನು ತೋರಿಸಿ, ನೇರ ಪ್ರಸಾರದಲ್ಲಿ ಅದಕ್ಕೆ ಸಂಬಂಧಪಟ್ಟವರನ್ನು ಹಿಡಿದುತಂದು ಅವರನ್ನು ಹಣ್ಣುಗಾಯಿ ನೀರು ಗಾಯಿ ಮಾಡುವ ನಮ್ಮ ಮಾಧ್ಯಮಗಳು ಮಾಜಿ ಮುಖ್ಯಮಂತ್ರಿಯವರ ಮದುವೆಯ ವಿಚಾರ ಕೋರ್ಟ್ನ ತನಕ ಬಂದಿದ್ದರೂ ಸಹ  ಇದುವರೆವಿಗೂ ಸಂಬಂಧಪಟ್ಟವರನ್ನು ಕರೆತಂದು ಅದರ ಬಗ್ಗೆ ಜನರಿಗೆ ತೋರಿಸುವ ಕೆಲಸ ಮಾಡಿದ್ದಾರಾ? 
ಇಲ್ಲ ಯಾಕೆ ಹೀಗೆ ? ಜನಸಾಮಾನ್ಯರಿಗೊಂದು ನ್ಯಾಯ, ಬೇರೆಯವರಿಗೆ ಒಂದು ನ್ಯಾಯವಾ?  

ಮತ್ತೊಂದು ವಾಹಿನಿ ಯಂತೂ ಬೆಳಗಿನ ಸಮಯದಲ್ಲಿ "ಬಿಡದಿಯ ನಿತ್ಯಾನಂದಸ್ವಾಮಿಯ ಪ್ರವಚನಗಳನ್ನು" ಪ್ರದರ್ಶಿಸುತ್ತಿದ್ದಾರೆ. ಎಲ್ಲಿಗೆ ಬಂದು ನಿಂತಿದೆ. ನಮ್ಮ ಮಾಧ್ಯಮಗಳು. 
ರಾಜಕಾರಣಿಗಳಿಗೆ ನಮ್ಮ ಕರ್ನಾಟಕದಲ್ಲಿ ಕನ್ನಡಿಗರಿಗೆ ಇರಲು ನೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣ  ಉಂಟಾಗುತ್ತಿದ್ದರೂ ಸಹ ಪರಭಾಷಿಕರ ವಲಸೆಯನ್ನು ತಪ್ಪಿಸುತ್ತಿಲ್ಲ. ಕಾರಣ  "ಓಟ್ ಬ್ಯಾಂಕ್ " ಯಾವನೇ ಭಾಷೆಯವನಾದರೂ ತನ್ನ ಮನೆ ಮುರುಕಲು ಮನೆಯಾಗಿದ್ದರೂ ಪರಭಾಷಿಕರಿಗೆ ಐಶಾರಾಮಿ ಜೀವನ ನಡೆಸಲು ಅವಕಾಶಗಳು ಮಾಡಿಕೊಡುತ್ತಿವೆ. 
ಹಾಗೆಯೇ ನಮ್ಮ ವಾಹಿನಿಗಳು ಅಷ್ಟೇ. ಬೇರೆ ಭಾಷೆಯ ಚಲನ ಚಿತ್ರಗಳನ್ನು ನೇರವಾಗಿ ಗಂಟೆಗಟ್ಟಲೇ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತವೆ. (ನಮ್ಮ ಪುಣ್ಯಕ್ಕೆ ಅವರವರ ಭಾಷೆಗಳಲ್ಲೇ ವಿವರಣೆ ನೀಡುತ್ತಿಲ್ಲ) ಬೇರೆ ಯಾವುದೇ ರಾಜ್ಯಗಳಲ್ಲಿ ಒಂದೇ ಒಂದು ಕನ್ನಡದ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆಯಾ ? ಉದಾಹರಣೆಗಳಿಲ್ಲದಿರುವಾಗ ನಮ್ಮವರಿಗ್ಯಾಕೆ ಪರಭಾಷಿಕರ ಬಗ್ಗೆ ವ್ಯಾಮೋಹ?

ಇಲ್ಲಿಗೆ ಬಂದು ನಿಂತಿದೆ ನಮ್ಮ ವ್ಯವಸ್ಥೆ.. ನಮ್ಮ ಈ ವ್ಯವಸ್ಥೆಯನ್ನು  ಬದಲಿಸಲು ಸಾಧ್ಯವೇ?
ಖಂಡಿತಾ ಸಾಧ್ಯವಿಲ್ಲ. ಬೇಲಿಯೇ ಎದ್ದು ಹೊಲ ಮೇಯುತ್ತಿದ್ದರೆ???????????

ರಾಜು ವಿನಯ್ ದಾವಣಗೆರೆ

No comments:

Post a Comment